RGRHCL Punarvasati

Latest Version

Version
Update
Jul 6, 2022
Category
Installs
50,000+

App APKs

RGRHCL Punarvasati APP

ನೆರೆಹಾವಳಿ ಸಂತ್ರಸ್ಥರ ವಸತಿ ಕಾರ್ಯಕ್ರಮದಡಿಯಲ್ಲಿ ವಸತಿ ಸೌಕರ್ಯ ನೀಡಲು ತಹಶಿಲ್ದಾರ್ ಲಾಗಿನ್ ನಲ್ಲಿ ನಮುದು ಮಾಡಲಾದ ವಿವರಗಳು ಡಿಸಿ ಲಾಗಿನ್ ಗೆ ವರ್ಗಾವಾಗುವುದು. ಡಿಸಿ ಅವರು ಡಿಎಸ್ ಸಿ ಮೂಲಕ ಸದರಿ ಫಲಾನುಭವಿಗಳ ಪಟ್ಟಿಗೆ ಅನುಮೋದನೆಯನ್ನು ನೀಡುತ್ತಾರೆ. ಸದರಿ ಅನುಮೋದಿತ ಫಲಾನುಭವಿಗಳ ಪಟ್ಟಿಯು ಗ್ರಾಮೀಣ ಪ್ರದೇಶವಾದಲ್ಲಿ ಸಂಬಂಧಪಟ್ಟ ಪಿಡಿಓ ಲಾಗಿನ್ ಗೆ ಹಾಗೂ ನಗರ ಪ್ರದೇಶವಾದಲ್ಲಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಲಾಗಿನ್ ಗೆ ಜಿಪಿಎಸ್ ಮಾಡಲು ವರ್ಗಾವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಪಿಡಿಓ ಮತ್ತು ನಗರ ಪ್ರದೇಶದಲ್ಲಿ ಈಗಾಗಲೇ ವಸತಿ ಯೋಜನೆಯಡಿ ಜಿಪಿಎಸ್ ಮಾಡುತ್ತಿರುವ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮಾತ್ರ ಜಿಪಿಎಸ್ ಮಾಡತಕ್ಕದ್ದು. ಸದರಿ ಮನೆಗಳ ಜಿಪಿಎಸ್ ಮಾಡಲು ಗ್ರಾಮ ಲೆಕ್ಕಿಗರು (Village Accountant) ಕಡ್ಡಾಯವಾಗಿ ಪಿಡಿಒ / ನ.ಸ್ಥ.ಸ. ಅಧಿಕಾರಿಗಳ ಜೊತೆಗೆ ಹೋಗುವುದು.
Read more

Advertisement